ರಾಜ್ಯಹುಬ್ಬಳ್ಳಿಗೆ ನಾಳೆ ಪ್ರಧಾನಿ ಆಗಮನ: ಟೀಕೆ ವ್ಯಕ್ತವಾದ ನಂತರ ಸುತ್ತೋಲೆ ಹಿಂತೆಗೆದುಕೊಂಡ ಧಾರವಾಡ ಪಿಯು ಶಿಕ್ಷಣ ಇಲಾಖೆ
ಹುಬ್ಬಳ್ಳಿಯಲ್ಲಿ ನಾಳೆ ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳಿಂದ ಕನಿಷ್ಠ 100 ಮಕ್ಕಳನ್ನು ಕರೆತರಬೇಕೆಂದು ಆದೇಶ ಹೊರಡಿಸಿ ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪತ್ರ ಬರೆದಿದ್ದರು.