ದೇಶಇಡೀ ದೇಶ ರಾವಣ ದಹನ ಮಾಡಿದರೆ ಈ ಒಂದು ಗ್ರಾಮ ಮಾತ್ರ ರಾವಣನನ್ನು ಪೂಜಿಸುತ್ತದೆ!
ರಾವಣ... ಹೆಸರು ಕೇಳಿದ ಕೂಡಲೇ ರಾಕ್ಷಸ, ದುಷ್ಟ, ಪರಸತಿ ವ್ಯಾಮೋಹಿ, ಭಯಂಕರ. ದುರುಳ ಹೀಗೆ ಒಳ್ಳೆಯದಕ್ಕಿಂತಲೂ ಕೆಟ್ಟ ಬಿರುದುಗಳೇ ನೆನಪಾಗುತ್ತವೆ. ದಸರಾ ಹಬ್ಬದ ದಿನದಂದು ಕೆಟ್ಟದ್ದನ್ನು ಸೂಚಿಸುವ ರಾವಣನ ಬೃಹತ್ ಪ್ರತಿಮೆ ತಯಾರಿಸಿ ಹಲವೆಡೆ ಸುಡಲಾಗುತ್ತದೆ. ಅಂದರೆ, ದುಷ್ಚರ ವಿರುದ್ಧ ವಿಜಯವನ್ನು ಸಾಧಿಸುವ ಹಬ್ಬವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.