ರಾಜ್ಯಬೆಂಗಳೂರು: ಪರಿಚಿತ ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡಿ ಸೆಕ್ಸ್ ಗೆ ಒತ್ತಾಯ, ಆರೋಪಿ ಬಂಧನ
ಪರಿಚಿತ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿ ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮರ್ ಪರಿಮಣಿಕ ಬಂಧಿತ ಆರೋಪಿಯಾಗಿದ್ದು, ಹಲಸೂರಿನ ಬಾಡಿಗೆ ಮನೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.