ರಾಜ್ಯಹುಬ್ಬಳ್ಳಿ: ಅಂಜಲಿ ಹತ್ಯೆ ಪ್ರಕರಣ; ಆರೋಪಿ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ವಿಚಾರಗಳು ಬಹಿರಂಗ!
ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ವಿಶ್ವನಾಥ್ ಸಾವಂತ್ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಶ್ವ ಅಮಾಯಕ ಯುವತಿಯರನ್ನು ಶೋಷಣೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ ಆರೋಪಿ ಕುಡುಕನಾಗಿದ್ದು, ಕಳ್ಳತನ ಮಾಡುತ್ತಿದ್ದ. ಬೈಕ್ ಕಳ್ಳತನ ಮಾಡುವ ತಂಡದಲ್ಲಿ ಈತನೂ ಬಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.