ದೇಶಒಡಿಶಾ: ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಕುಡುಕ ಗಂಡ!
ಮದುವೆ ಮೆರವಣಿಗೆಯಲ್ಲಿ ತನ್ನ ಅನುಮತಿಯಿಲ್ಲದೆ ನೃತ್ಯ ಮಾಡಿದ್ದಕ್ಕಾಗಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಹಾಕಿರುವ ಆಘಾತಕಾರಿ ಘಟನೆ ಬಾಲಸೋರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೈಕಪದವಿನ 43 ವರ್ಷದ ರಾಮ್ ಸಿಂಗ್ ಆರೋಪಿ. ಮೃತ ಮಹಿಳೆಯನ್ನು ಶರ್ಮಿಳಾ ಸಿಂಗ್ (35) ಎಂದು ಗುರುತಿಸಲಾಗಿದೆ. ರಾಮ್ ವೃತ್ತಿಯಲ್ಲಿ ಚಾಲಕ ಎನ್ನಲಾಗಿದೆ.