ವಿಶೇಷಮೈಸೂರು: ಕೋವಿಡ್ ಸೋಂಕಿತರಿಗೆ ನೆರವಾಗಲು ಪಿಂಚಣಿ ಹಣ ದಾನ ಮಾಡಿದ 70 ವರ್ಷದ ವೃದ್ಧೆ!
ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಹಿರೇನಹಳ್ಳಿ ನಿವಾಸಿಯಾಗಿರುವ 70 ವರ್ಷದ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.