ರಾಜ್ಯವೈಟ್ಫೀಲ್ಡ್-ಐಟಿಪಿಎಲ್ ಮಾರ್ಗದಲ್ಲಿ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರ; ಐಟಿ ಉದ್ಯೋಗಿಗಳ ದಶಕಗಳ ಬೇಡಿಕೆ ಈಗ ನನಸು!
ವೈಟ್ಫೀಲ್ಡ್ ಡಿಪೋ ಮತ್ತು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ಮೆಟ್ರೋ ನಿಲ್ದಾಣದ ನಡುವೆ ಆರು ಬೋಗಿಗಳ ಮೆಟ್ರೋ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಗಿದ್ದು, ಶೀಘ್ರದಲ್ಲೇ ಈ ಭಾಗದಲ್ಲಿ ಅಧಿಕೃತವಾಗಿ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ.