ರಾಜ್ಯವಾರದಲ್ಲಿ ಒಂದು ದಿನ ಪೊಲೀಸರಿಗೆ ರಜೆ, ಸಹಾಯವಾಣಿ ಆರಂಭ: ಭಾಸ್ಕರ್ ರಾವ್
ಕೊರೋನಾ ವೈರಸ್ ಹತೋಟಿಗೆ ತರಲು ಲಾಕ್ಡೌನ್ ಆದೇಶವಾದಾಗಿನಿಂದ ಪೊಲೀಸರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಕೊಂಚ ವಿಶ್ರಾಂತಿಗಾಗಿ ಸಮಯಾವಕಾಶ ನೀಡಲು ಮುಂದಾಗಿದ್ದಾರೆ.