ರಾಜ್ಯಭೂಮಿ ಮಾಲೀಕತ್ವ ಕುರಿತು ಗೊಂದಲ: 'ನಮ್ಮ ಮೆಟ್ರೋ' ಪಿಲ್ಲರ್ ಗಳ ಮೇಲೆ ತ್ಯಾಜ್ಯ ತೈಲ ಸುರಿದ ವ್ಯಕ್ತಿ, ಕಾಮಗಾರಿ ಸ್ಥಗಿತ
ಭೂಮಿ ಹಕ್ಕು ಸಾಧಿಸುತ್ತಿರುವ ಮಾಲೀಕನೊಬ್ಬ ಪರಿಹಾರದ ಹಣ ನನಗೆ ಸೇರಬೇಕೆಂದು ಆಗ್ರಹಿಸಿ ನಿರ್ಮಾಣ ಹಂತದ ನಮ್ಮ ಮೆಟ್ರೋದ ಪಿಲ್ಲರ್'ಗಳ ಮೇಲೆ ತ್ಯಾಜ್ಯ ಸುರಿದಿದ್ದು, ಇದರಿಂದ ಕಾಮಗಾರಿ ಕೆಲಸ ಸ್ಥಗಿತಗೊಂಡಿರುವ ಘಟನೆಯೊಂದು ಹೊರ ವರ್ತುಲ ರಸ್ತೆ ಮಾರ್ಗದ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.