ಸಿನಿಮಾ ಸುದ್ದಿ 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೈರು: ಮಾಧ್ಯಮಗಳ ವಿರುದ್ಧ ನಟಿ ಶ್ರುತಿ ಹಾಸನ್ ಕಿಡಿ
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೈರಾದ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ನಟಿ ಶ್ರುತಿ ಹಾಸನ್ ತಿರುಗಿ ಬಿದಿದ್ದಾರೆ. ಮಾನಸಿಕ ತೊಂದರೆಯಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು.