VV Puram Food Street

ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ನ್ಯೂ ಲುಕ್: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಸೂಚನೆ
ರಾಜಧಾನಿಯ ಪಾರಂಪರಿಕ ಹಾಗೂ ಹಳೆಯ ಪ್ರದೇಶವಾಗಿರುವ ವಿ.ವಿ. ಪುರಂನ ಫುಡ್ ಸ್ಟ್ರೀಟ್ (ತಿಂಡಿ ಬೀದಿ) ಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಕಾಮಗಾರಿಗಳ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಬುಧವಾರ ಸೂಚನೆ ನೀಡಿದೆ.

ಆಧುನಿಕ ಸ್ಪರ್ಶದೊಂದಿಗೆ ಸಜ್ಜುಗೊಂಡ 'ವಿವಿ ಪುರಂ ಫುಡ್ ಸ್ಟ್ರೀಟ್': ಸ್ವಾತಂತ್ರ್ಯೋತ್ಸವಕ್ಕೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದು!
ಸಿಲಿಕಾನ್ ಸಿಟಿ ಬೆಂಗಳೂರು ಜನತೆಯ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ ಆಧುನಿಕ ಸ್ಪರ್ಶದೊಂದಿಗೆ ಪುನರಾರಂಭಕ್ಕೆ ಸಜ್ಜುಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಜನತೆಗೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದಾಗಿದೆ.

ವಿವಿ ಪುರಂ ಫುಡ್ ಸ್ಟ್ರೀಟ್'ಗೆ ಸ್ಮಾರ್ಟ್ ಟಚ್: ಮರುನಾಮಕರಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಬಿಬಿಎಂಪಿ
ರೂ.6 ಕೋಟಿ ವೆಚ್ಚದಲ್ಲಿ ವಿವಿ ಪುರದ ಫುಡ್ ಸ್ಟ್ರೀಟ್ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಲ್ಕು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು: ವಿ ವಿ ಪುರಂ ಫುಡ್ ಸ್ಟ್ರೀಟ್ ನಲ್ಲಿ ಆಹಾರ ಸವಿದ ವಿದೇಶಾಂಗ ಸಚಿವ ಎಸ್. ಜೈಶಂಕರ್
ಬೆಂಗಳೂರಿನ ಹೆಸರಾಂತ ವಿವಿ ಪುರಂ ಫುಡ್ ಸ್ಟ್ರೀಟ್ ಗೆ ಭೇಟಿ ನೀಡಿದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ , ಕೆಲ ತಿಂಡಿಗಳನ್ನು ಸವಿದರು. ಫುಡ್ ಸ್ಟ್ರೀಟ್ ಗೆ ಆಗಮಿಸಿದ್ದ ಆಹಾರ ಪ್ರಿಯರು, ಜನರೊಂದಿಗೆ ಕೆಲ ಸಮಯ ಮಾತನಾಡುವ ಮೂಲಕ ಇಲ್ಲಿನ ಆಹಾರದ ಬಗ್ಗೆ ಮಾಹಿತಿ ಪಡೆದರು.

ಕೊರೋನಾ ಭೀತಿ: ವಿವಿಪುರಂ ಫುಡ್ ಸ್ಟ್ರೀಟ್ ಬಂದ್!
ಎಲ್ಲೆಲ್ಲೂ ಕೊರೋನಾ ಭೀತಿ ಕಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದರಿಂದ ಜನನಿಬಿಡ ಪ್ರದೇಶಗಳೆಲ್ಲಾ ಸ್ತಬ್ಧಗೊಳ್ಳುತ್ತಿದೆ. ಈ ಸಾಲಿಗೆ ವಿವಿಪುರಂ ನ ಫುಡ್ ಸ್ಟ್ರೀಟ್ ಸೇರಿದೆ.

