ರಾಜಕೀಯಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಹೆಜ್ಜೆ: ಆಡಳಿತ ಪಕ್ಷದ ಯತ್ನವನ್ನು ವಿಫಲಗೊಳಿಸಲು ಎಚ್ಡಿಕೆ ಕಸರತ್ತು
ಹಳೆ ಮೈಸೂರಿನತ್ತ ಇದೀಗ ಮೂರು ರಾಜಕೀಯ ಪಕ್ಷಗಳು ದೃಷ್ಠಿ ನೆಟ್ಟಿವೆ. ಅದರಲ್ಲೂ ಬಿಜೆಪಿ, ಆ ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಬೇಕಾದ ತಂತ್ರಗಳನ್ನು ಈಗಿನಿಂದಲೇ ಶುರುಮಾಡಿದೆ. ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರಿನಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ, ಒಕ್ಕಲಿಗ ನಾಯಕನನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.