ದೇಶರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಕೆನಡಾದಲ್ಲಿ ವೀಸಾ ಸೇವೆ ಪುನರಾಂಭಿಸಿದ ಭಾರತ!
ಎರಡು ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತವು ಕೆನಡಾದಲ್ಲಿ ವೀಸಾ ಸೇವೆಗಳನ್ನು ಪುನರಾರಂಭಿಸಿದೆ. ಪ್ರವೇಶ ಸೇರಿದಂತೆ ವ್ಯಾಪಾರ, ವೈದ್ಯಕೀಯ ವೀಸಾ ಮತ್ತು ಕಾನ್ಫರೆನ್ಸ್ ವೀಸಾ ಸೇವೆಯನ್ನು ಪುನರಾರಂಭಿಸಲಿದೆ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಬುಧವಾರ ತಿಳಿಸಿದೆ.