ದೇಶಕೋವಿಡ್-19 ಮುಗಿದ ಮೇಲೆಯೂ ವರ್ಚುವಲ್ ಕೋರ್ಟ್ ಕಲಾಪವನ್ನು ಮುಂದುವರಿಸಿ: ಸಂಸದೀಯ ಸಮಿತಿ ಶಿಫಾರಸು
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವ ಕಡಿಮೆಯಾದ ಮೇಲೆ ಸಹ ನಿರ್ದಿಷ್ಟ ಕೇಸುಗಳಿಗೆ ವರ್ಚುವಲ್ ಕೋರ್ಟ್ ಮೂಲಕ ವಿಚಾರಣೆ ನಡೆಸುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಕಾನೂನು ಮತ್ತು ನ್ಯಾಯ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ಶಿಫಾರಸು ಮಾಡಿ ವರದಿ ಸಲ್ಲಿಸಿದೆ.