Virajpet

ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ! Video
ಹುಬ್ಬಳ್ಳಿ - ಧಾರವಾಡ ಮೂಲದ ಬಸವರಾಜು ಹಾಗೂ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಅವರಿಬ್ಬರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗಿನಲ್ಲಿ ಕರುಳು ಹಿಂಡುವ ಘಟನೆ: ತಾಯಿಯ ಅಕ್ರಮ ಸಂಬಂಧಕ್ಕೆ ನಾಲ್ಕು ವರ್ಷದ ಮಗು ಬಲಿ
ಮೃತ ಮಗುವನ್ನು ಚರಣ್ ಎಂದು ಗುರುತಿಸಲಾಗಿದ್ದು, ಬಾಲಕನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರತಾಪ ಎಂಬ ವ್ಯಕ್ತಿ ಬಡಿಗೆಯಿಂದ ಮನಸೋ ಇಚ್ಛೆ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಭಾರೀ ಮಳೆ: ವಿರಾಜಪೇಟೆ, ಕರಡಿಗೋಡುವಿನಲ್ಲಿ ನೆರವು ಕೇಂದ್ರ ತೆರೆದ ಅಧಿಕಾರಿಗಳು
ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕಡಿತಗೊಂಡಿದೆ.

ಕೊಡಗು: ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಲೈನ್ ಮ್ಯಾನ್ ದುರ್ಮರಣ
ಮನೆಯೊಂದರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಸಿಬ್ಬಂದಿ ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ಆನ್ ಲೈನ್ ಮೂಲಕ ಗಾಂಜಾ ಮಾರಾಟ: ವಿರಾಜಪೇಟೆಯಲ್ಲಿ 12 ಮಂದಿ ಸೆರೆ
ಆನ್ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ ನಡೆಸಿದ್ದ 12 ಮಂದಿಯನ್ನು ಕೊಡಗಿನ ವಿರಾಜಪೇಟೆಯಲ್ಲಿ ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ. ಇವರೆಲ್ಲರೂ ಕಾಲೇಜು ವಿದ್ಯಾರ್ಹಿಗಳಿಗೆ ಗಾಂಜಾ ಪೂರೈಸುತ್ತಿದ್ದರೆಂದು ಆರೋಪಿಸಲಾಗಿದೆ.

ಕೊಡಗಿನ ವಿರಾಜಪೇಟೆ ರಸ್ತೆ ಬದಿಯಲ್ಲೇ ಹುಲಿ ಪ್ರತ್ಯಕ್ಷ!
ಕೊಡಗಿನ ವಿರಾಜಪೇಟೆ ರಸ್ತೆ ಬದಿಯಲ್ಲಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಮಲಗಿರುವುದು ಕಂಡುಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಮಡಿಕೇರಿ, ವಿರಾಜಪೇಟೆಗೆ ಕೆಎಸ್ ಆರ್ ಟಿಸಿ ಬಸ್ ಆರಂಭ
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿಗೆ ಬಸ್ ಸೇವೆ ಆರಂಭಿಸಿದೆ. ಕೊಡಗು ಜಿಲ್ಲೆಯ ಈ ಪಟ್ಟಣಗಳಿಗೆ ಐರಾವತ ಕ್ಲಬ್ ಬಸ್ ಸೇವೆ ಆರಂಭಿಸಿದೆ, ಕೆಎಸ್ ಆರ್ ಟಿಸಿ ಮತ್ತು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ವಿರಾಜಪೇಟೆ: ಅರಣ್ಯಾಧಿಕಾರಿ ಹತ್ಯೆ ಪ್ರಕರಣ, 23 ವರ್ಷಗಳ ನಂತರ ಆರೋಪಿ ಅಂದರ್
ಕೊಡಗಿನ ವಿರಾಜಪೇಟೆ ತಾಲೂಕು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯಾಧಿಕಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯನ್ನು ಬರೋಬ್ಬರಿ 23 ವರ್ಷಗಳ ನಂತರ ಬಂಧಿಸಲಾಗಿದೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಂಕಣಕಾರ ಸಂತೋಷ್ ತಮ್ಮಯ್ಯ ಬಿಜೆಪಿ ಅಭ್ಯರ್ಥಿ?
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರು ಕೇಳಿಬರುತ್ತಿದೆ.

