ದೇಶಪಶ್ಚಿಮ ಬಂಗಾಳ: ಹಿಂಸಾಚಾರ ನಡೆದ 690 ಮತಗಟ್ಟೆಗಳಲ್ಲಿ ಇಂದು ಮರು ಮತದಾನ
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮತಗಟ್ಟೆಗಳನ್ನು ಧ್ವಂಸಗೊಳಿಸಿ, ಬ್ಯಾಲೆಟ್ ಪೇಪರ್ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಈ ಮತದಾನವನ್ನು ಅಸಿಂಧು ಎಂದು ಚುನಾವಣಾ ಆಯೋಗ ಘೋಷಿಸಿದ್ದು, ಎಲ್ಲಾ 690 ಬೂತ್ಗಳಲ್ಲಿ ಸೋಮವಾರ ಮರು ಮತದಾನವನ್ನು ಪ್ರಕಟಿಸಿದೆ.