ದೇಶರಾಮಜನ್ಮಭೂಮಿ: ರಾಮ ಲಲ್ಲಾಗೆ ಗುಂಡುನಿರೋಧಕ, ಇನ್ನಷ್ಟು ಸಮೀಪದಿಂದ ದರ್ಶನ
ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ಗುಂಡು ನಿರೋಧಕ ಆವರಣ ಸೇರಲಿದ್ದಾನೆ! ಹೌದು ಇದೇ ಮಾರ್ಚ್ 25ಕ್ಕೆ ರಾಮ ಲಲ್ಲಾ ವಿಗ್ರಹವನ್ನು ಈಗಿರುವ ತಾತ್ಕಾಲಿಕ ದೇವಾಲಯದ ಸಮೀಪ ಗುಂಡು ನಿರೋಧಕ ಆವರಣದ ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಕುಮಾರ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.