ಸಿನಿಮಾ ಸುದ್ದಿಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ಮಾಸ್ ಟೈಟಲ್ ಟ್ರಾಕ್ ಬಿಡುಗಡೆ
ಧನಂಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೊಯ್ಸಳ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಯೋಜಿಸಿದ್ದು, ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದಾರೆ. ಈ ಟ್ರ್ಯಾಕ್ ಅನ್ನು ನಕಾಶ್ ಅಜೀಜ್ ಹಾಡಿದ್ದಾರೆ ಮತ್ತು ಯೋಗಿ ಬಿ ರಾಪ್ ಕೂಡ ಧ್ವನಿ ನೀಡಿದ್ದಾರೆ.