ದೇಶಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾಚಾರದ ವಿಡಿಯೋ, ಫೋಟೊಗಳ ಪ್ರಸಾರದ ವಿರುದ್ಧ ಕ್ರಮ: ಮಣಿಪುರ ಸರ್ಕಾರ
ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಹಿಂಸಾಚಾರದ ವಿಡಿಯೋಗಳು ಮತ್ತು ಫೋಟೊಗಳ ಪ್ರಸಾರವನ್ನು ಮಣಿಪುರ ಸರ್ಕಾರ ನಿಷೇಧಿಸಿದೆ. ವ್ಯಕ್ತಿಯೊಬ್ಬನನ್ನು ಸುಟ್ಟು ಹಾಕುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ಆಕ್ರೋಶ ಮತ್ತು ಖಂಡನೆಗೆ ಗುರಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ನಿರ್ದೇಶನ ಬಂದಿದೆ.