ರಾಜ್ಯನವಾಜ್ ಸಾವು ಪ್ರಕರಣ: ಪ್ರೋಟೋಕಾಲ್ ಅನುಸರಣೆ, ವೈದ್ಯಕೀಯ ನಿರ್ಲಕ್ಷ್ಯವಾಗಿಲ್ಲ- ತನಿಖಾ ಸಮಿತಿ ವರದಿ
ಫೋರ್ನಿಯರ್ ಗ್ಯಾಂಗ್ರಿನ್ ಮತ್ತು ನಿಯಂತ್ರಣ ತಪ್ಪಿದ ಮಧುಮೇಹದಿಂದ ಬಳಲುತ್ತಿದ್ದ ಶಹನವಾಜ್ ಅವರನ್ನು ಫೆಬ್ರವರಿ 19ರಿಂದ ಮಾರ್ಚ್ 3ರವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಏಪ್ರಿಲ್ 22ರಂದು ಚಿಕಿತ್ಸೆ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.