ರಾಜ್ಯಸಾಮೂಹಿಕ ಕೊಲೆ ಮಾಡಿದವನಿಗೆ ಆಗಸ್ಟ್ 15ರಂದು ಬಿಡುಗಡೆ ಭಾಗ್ಯ: ಕುಟುಂಬಸ್ಥರ ಆಕ್ಷೇಪ
ಅದು 1994ರ ಫೆಬ್ರವರಿ 23ನೇ ತಾರೀಕು. ಮಂಗಳೂರು ಸಮೀಪ ವಾಮಂಜೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಕರಾವಳಿಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದ ಒಬ್ಬನೇ ಒಬ್ಬ ಅಪರಾಧಿ ವೀಣ್ ಕುಮಾರ್ ಎಂಬಾತನಿಗೆ ಇದೀಗ ಸನ್ನಡತೆ ಆಧಾರದ ಮೇಲೆ ಆಗಸ್ಟ್ 15ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತಿದೆ.