Vibhutipura Lake

ಬೆಂಗಳೂರು: ವಿಭೂತಿಪುರ ಕೆರೆಯಲ್ಲಿ 'ಆಫ್ರಿಕನ್ ಕ್ಯಾಟ್ ಫಿಶ್'; ಪುನಶ್ಚೇತನಕ್ಕೆ ಭಾರಿ ಹಿನ್ನಡೆ!
ಈಗಾಗಲೇ ಕೆರೆ ಮತ್ತು ಬಫರ್ ಝೋನ್ ಒತ್ತುವರಿ ಮಾಡಲಾಗಿದೆ ಎಂದು ಹೇಳುತ್ತಿದ್ದ ವಾಯುವಿಹಾರಿ ಮತ್ತು ಕೆರೆ ಸಂರಕ್ಷಣೆ ಕಾರ್ಯಕರ್ತರು, ಈಗ ಮಳೆಯಿಂದಾಗಿ ಕೆರೆಗೆ ಕೊಳಕು ನೀರು ನುಗ್ಗಿದ್ದು, ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್‌ಗಳು ಕೆರೆಯಲ್ಲಿ ಬೀಡುಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಮಳೆಯಿಂದ ವಿಭೂತಿಪುರ ಕೆರೆಗೆ ನುಗ್ಗಿದ ಚರಂಡಿ ನೀರು: 35 ಲೋಡ್ ಹೂಳು ತೆರವುಗೊಳಿಸಿದ BBMP
ಕೆರೆ ಸ್ವಚ್ಛಗೊಳಿಸುವ ಕಾರ್ಯವನ್ನು ವಹಿಸಲಾದ ಸಂಸ್ಥೆಯು 10 ದಿನಗಳಲ್ಲಿ 35 ಟಿಪ್ಪರ್ ಲೋಡ್‌ಗಳ ಹೂಳನ್ನು ತೆರವುಗೊಳಿಸಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯ ಜೆ ತಿಳಿಸಿದ್ದಾರೆ.

ಬೆಂಗಳೂರು: ವಿಭೂತಿಪುರ ಕೆರೆಯ ಹೂಳು ತೆಗೆಯದ ಬಿಬಿಎಂಪಿ ವಿರುದ್ಧ ಪರಿಸರವಾದಿಗಳ ಆಕ್ರೋಶ
ವಿಭೂತಿಪುರ ಕೆರೆಯ ಹೂಳು ತೆಗೆಯುವ, ಕೊಳಚೆ ನೀರು ಸಂಸ್ಕರಿಸುವ ಮತ್ತು ಕೆರೆಗೆ ನೀರು ತುಂಬಿಸುವ ಕುರಿತು ಸುಳ್ಳು ಭರವಸೆಗಳನ್ನು ನೀಡಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆರೆ ವಿಭಾಗದ ವಿರುದ್ಧ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಭೂತಿಪುರ ಕೆರೆ: STP ನಿರ್ಮಾಣ ಕಾರ್ಯ ಪೂರ್ಣಗೊಂಡರೂ ವಿದ್ಯುತ್ ಪೂರೈಸದ BESCOM, ಕಾರ್ಯಾರಂಭ ಮತ್ತಷ್ಟು ತಡ!
ನಗರದ ವಿಭೂತಿಪುರ ಕೆರೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಒಳಚರಂಡಿ ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಸ್ಥಾಪಿಸಿ ಸುಮಾರು ಒಂದು ತಿಂಗಳಾದರೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಇನ್ನೂ ವಿದ್ಯುತ್ ಸಂಪರ್ಕ ನೀಡದ ಕಾರಣ ಎಸ್‌ಟಿಪಿ ಕಾರ್ಯಾರಂಭ ತಡವಾಗುತ್ತಿದೆ.

ವಿಭೂತಿಪುರ ಕೆರೆಗೆ ಬೇಲಿ ಹಾಕಿ, ಭದ್ರತಾ ಸಿಬ್ಬಂದಿಗಳ ನೇಮಿಸಿ: ಕೆರೆ ಕಾರ್ಯಕರ್ತರ ಆಗ್ರಹ
ಎಚ್‌ಎಎಲ್ ಬಳಿಯ ವಿಭೂತಿಪುರ ಕೆರೆಗೆ ಬೇಲಿ ಹಾಕಿ, ಭದ್ರತಾ ಸಿಬ್ಬಂದಿಗಳ ನೇಮಕ ಮಾಡುವಂತೆ ಕೆರೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಈಜಲು ಹೋದ ವ್ಯಕ್ತಿ ವಿಭೂತಿಕೆರೆಯಲ್ಲಿ ಮುಳುಗಿ ಸಾವು
ಕುಡಿದ ಅಮಲಿನಲ್ಲಿ ಈಜಲು ಹೋದ 33 ವರ್ಷದ ವ್ಯಕ್ತಿಯೊಬ್ಬರು ವಿಭೂತಿಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿಭೂತಿಪುರ ನಿವಾಸಿ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಅವರು ಬಾರ್ ಬೆಂಡಿಂಗ್ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು: ಕೆರೆಯೊಳಗೆ ಅಕ್ರಮ ಕಟ್ಟಡ ನಿರ್ಮಾಣ: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು?
ವಿಭೂತಿಪುರ ಕೆರೆಗೆ ಪ್ಲಾಸ್ಟಿಕ್ ತ್ಯಾಜ್ಯ ಸುರಿ ತುಂಬಿದ ಪ್ರಕರಣ ಹಸಿರಾಗಿರುವಂತೆಯೇ ಕೆರೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ವಿಷಯ ತಿಳಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ವಿಭೂತಿಪುರ ಕೆರೆ ಸ್ವಚ್ಛಗೊಳಿಸಿದ ಸ್ವಯಂಸೇವಕರು; 5 ದಿನಗಳ ನಂತರ ಕಸ ಸುರಿದ ಯುವಕರು!
ವಿಭೂತಿಪುರ ಕೆರೆ ಕ್ಷೇಮಾಭಿವೃದ್ಧಿ ಸಂಘದ ಸ್ವಯಂಸೇವಕರು ಹಾಗೂ ಸಮೀಪದ ಬಡಾವಣೆಗಳ ನಾಗರಿಕರು ವಿಭೂತಿಪುರ ಕೆರೆಯ ಸುತ್ತಮುತ್ತ ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟು ಐದು ದಿನಗಳ ನಂತರ ಇಬ್ಬರು ಯುವಕರು ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ವೀಕ್ ಎಂಡ್ ನಲ್ಲಿ ವಿಭೂತಿ ಪುರ ಕೆರೆ ಸ್ವಚ್ಛಗೊಳಿಸುವ ಎನ್ ಜಿಒ ಸದಸ್ಯರು
ನಾಗರಿಕರೇ ಸ್ವತಃ ಜವಾಬ್ದಾರಿಯನ್ನು ಅರಿತು ನಡೆದುಕೊಂಡರೆ ಅದರ ಪರಿಣಾಮ ಅದ್ಭುತವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ ವಿನಾಯಕ ನಗರದ ವಿಭೂತಿ ಪುರ ಕೆರೆ.

