ರಾಜ್ಯಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯ
ಕನ್ನಡದ ಜನಪ್ರಿಯ ಹಿರಿಯ ನಟಿ ಲೀಲಾವತಿ ವಯೋ ಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಸೋಲದೇವನಹಳ್ಳಿಯಲ್ಲಿ ಇರುವ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯವನ್ನು ವಿಚಾರಿಸಿದರು.