ರಾಜ್ಯಹೊಯ್ಸಳರ ಕಾಲದ 13ನೇ ಶತಮಾನದಲ್ಲಿನ ವೀರಗಲ್ಲು ಮಂಡ್ಯದಲ್ಲಿ ಪತ್ತೆ
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ತಂಡವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.