VB-G RAM G Act

ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ರಣಕಹಳೆ: ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ; ಸಿದ್ದರಾಮಯ್ಯ, ಸುರ್ಜೇವಾಲಾ ಭಾಗಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಜನೆ, ಹಾಡು, ನೃತ್ಯ: ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಗೊಂದಲ-ಗದ್ದಲ; Video
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಪ್ರತಿಭಟನೆಯ ನಡುವೆಯೂ ಕೇಂದ್ರ ಸರ್ಕಾರವು VB-G RAM G ಕಾಯ್ದೆಯನ್ನು ರದ್ದುಗೊಳಿಸಿ MGNREGA ಮರುಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ನಿರ್ಣಯದ ಮೇಲಿನ ಚರ್ಚೆ ನಡೆಯಿತು.

'ವಿಬಿ-ಜಿ ರಾಮ್ ಜಿ' ಕಾನೂನು ವಾಪಸ್ ಪಡೆಯಲು ಮಹಾ ಪಂಚಾಯತ್ ಆಗ್ರಹ! ರಾಷ್ಟ್ರಪತಿಗೆ ಮನವಿ ಪತ್ರ
ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿಬಿ-ಜಿ ರಾಮ್ ಜಿ ಟೀಕಿಸುವ ಜಾಹೀರಾತು ಖಂಡಿಸಿ ಬಿಜೆಪಿ ಸಭಾತ್ಯಾಗ; ಸರ್ಕಾರ ಸಮರ್ಥನೆ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರಿಗೆದಾರರ ಹಣವನ್ನು "ಸುಳ್ಳು ಪ್ರಚಾರ"ಕ್ಕಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!
ಫೆ. 25ರ ತನಕ 45 ದಿನಗಳ ಕಾಲ ದೇಶಾದ್ಯಂತ ಪ್ರತಿಭಟನೆ ನಡೆಯಲಿದ್ದು, ಶನಿವಾರ ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಹೋರಾಟಕ್ಕೆ ಚಾಲನೆ ದೊರೆಯಿತು

VB-G RAM G ಕಾಯ್ದೆ ಉದ್ಯೋಗ ಹಕ್ಕುಗಳ ಕಸಿದುಕೊಳ್ಳಲ್ಲ, ಕಾಂಗ್ರೆಸ್ ಮಧ್ಯವರ್ತಿಗಳ ಕೈ ಸುಡುವಂತೆ ಮಾಡಲಿದೆ: ಕೇಂದ್ರ ಸರ್ಕಾರ ಸಮರ್ಥನೆ
ಕಾಯ್ದೆಯಲ್ಲಿ ಎಐ ತಂತ್ರಜ್ಞಾನ-ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗಾದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ.

VB-G RAM G ಕಾಯ್ದೆ: ಕೇಂದ್ರದ ವಿರುದ್ಧ ಕಾನೂನು ಸಮರಕ್ಕೆ ರಾಜ್ಯ ಸರ್ಕಾರ ಮುಂದು..!
ಜನರ ನ್ಯಾಯಾಲಯಕ್ಕೂ ‘ವಿಬಿ ಜಿ ರಾಮ್ ಜಿ’ ಕಾಯ್ದೆಯನ್ನು ತೆಗೆದುಕೊಂಡು ಹೋಗಲು ನಿರ್ಣಯಿಸಲಾಗಿದೆ. ಸಂವಿಧಾನದ 73ನೆ ತಿದ್ದುಪಡಿಯಾದ ನಂತರ ದೇಶದಲ್ಲಿ ವಿಕೇಂದ್ರೀಕರಣವಾಗಿದೆ. ಈ ಯೋಜನೆಯಿಂದ ವಿಕೇಂದ್ರೀಕರಣಕ್ಕೆ ಕೊಡಲಿ ಏಟು ಬಿದ್ದಿದೆ.

ಮನ್ರೇಗಾ ಭ್ರಷ್ಟಾಚಾರ ತಡೆಗೆ ಹೊಸ ಹೆಸರು; VB-G RAM G ಬಗ್ಗೆ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ: ವಿಜಯೇಂದ್ರ
ಮನ್ರೇಗಾ ಯೋಜನೆಯಲ್ಲಿ ಅನೇಕ ಅಂಶಗಳನ್ನು ಸುಧಾರಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ತರಲಾಗಿದೆ. ಮನ್ರೇಗಾ ಯೋಜನೆಯಲ್ಲಿ ದುರ್ಬಳಕೆ, ಭ್ರಷ್ಟಾಚಾರ ಇತ್ತು. ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ. ಅದಕ್ಕಾಗಿ ವಿಬಿ ಜಿ ರಾಮ್ ಜಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ವಿಬಿ-ಜಿ ರಾಮ್ ಜಿ ಕಾಯ್ದೆ ಅಸಂವಿಧಾನಿಕ, ಒಪ್ಪಲಾಗದು: ಪ್ರಿಯಾಂಕ್ ಖರ್ಗೆ
2025 ರ ವಿಬಿ-ಜಿ ರಾಮ್ ಜಿ ಕಾಯ್ದೆ ಬಡವರ ವಿರೋಧಿ, ರೈತ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಹೇಳಿದ್ದಾರೆ. ವಿಕಸಿತ ಭಾರತ್ ಎಂದರೆ ಏನು ಎಂಬುದರ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ, ರಾಜ್ಯಗಳ ವೆಚ್ಚದಲ್ಲಿ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ.

