ರಾಜ್ಯಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ ಮೊದಲ ಬಲಿ: ಮಾಜಿ ಸಿಇಒ ಆತ್ಮಹತ್ಯೆ
ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಹಗರಣ ಮೊದಲ ಬಲಿ ಪಡೆದಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬ್ಯಾಂಕಿನ ಮಾಜಿ ಸಿಇಓ ವಾಸುದೇವ್ ಮಯ್ಯ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.