Vandana Katariya

ವಂದನಾ ಕಟಾರಿಯಾ ಕುಟುಂಬಸ್ಥರಿಗೆ ಜಾತಿ ನಿಂದನೆ ಪ್ರಕರಣ: ಮತ್ತೋರ್ವ ವ್ಯಕ್ತಿಯ ಬಂಧನ
ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರ ಕುಟುಂಬಸ್ಥರಿಗೆ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದಂತಾಗಿದೆ.

ತಂಡದಲ್ಲಿ ಹೆಚ್ಚು ದಲಿತ ಆಟಗಾರರಿದ್ದರು ಆದ್ದರಿಂದ ಭಾರತಕ್ಕೆ ಸೋಲು: ಹಾಕಿ ತಾರೆಯ ಬಗ್ಗೆ ಜಾತಿ ನಿಂದನೆ!
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ ಸೆಮಿ ಫೈನಲ್ ನಲ್ಲಿ ಪರಾಭವಗೊಂಡ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಸ್ಟಾರ್ ಸ್ಟ್ರೈಕರ್ ವಂದನಾ ಕಟಾರಿಯಾ ಅವರ ನಿವಾಸದೆದುರು ಜಾತಿಗೆ ಸಂಬಂಧಿಸಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಹ್ಯಾಟ್ರಿಕ್ ಬಾರಿಸಿದ ಮೊದಲ ಭಾರತದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದ ವಂದನಾ ಕಟಾರಿಯಾ!
ಅಂತಿಮ ಹಂತದ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕು ಗೋಲುಗಳಿಂದ ಗೆಲುವು ಸಾಧಿಸಿದೆ. ಇನ್ನು ಈ ನಾಲ್ಕು ಗೋಲುಗಳಲ್ಲಿ ಮೂರನ್ನು ವಂದನಾ ಕಟಾರಿಯಾ ಬಾರಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

