ಸಿನಿಮಾ ಸುದ್ದಿ'ಕ್ಲಾಂತ' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿ ಸಂಗೀತಾ ಭಟ್ ಕಮ್ಬ್ಯಾಕ್
ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ವೈಭವ್ ಪ್ರಶಾಂತ್ ಅವರು ತಮ್ಮ ನಾಲ್ಕನೇ ಚಿತ್ರಕ್ಕೆ 'ಕ್ಲಾಂತ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಇದು ಸಂದೇಶವನ್ನು ಹೊಂದಿರುವ ಯೂತ್ಫುಲ್ ಚಿತ್ರವಾಗಿದ್ದು, ಪೋಷಕರಿಗೆ ಸತ್ಯವನ್ನು ಹೇಳುವುದು ಮತ್ತು ತಪ್ಪು ದಾರಿಯಲ್ಲಿ ಹೋಗಬಾರದು ಎಂಬ ಸರಳ ವಿಷಯಗಳ ಸುತ್ತ ಸುತ್ತುತ್ತದೆ' ಎನ್ನುತ್ತಾರೆ ನಿರ್ದೇಶಕರು.