ಕ್ರಿಕೆಟ್ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ: ವರದಿ
ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿದ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳೇ ಗರಂ ಆಗಿರುವ ಹೊತ್ತಿನಲ್ಲಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದ್ದು, ತಮ್ಮ ಮಲಸಹೋದರ ವೈಭವ್ ಪಾಂಡ್ಯರಿಂದ ವಂಚನೆಗೊಳಗಾದ ಬಳಿಕ ಅವರು ಅಂಬಾನಿ ಕುಟುಂಬದಿಂದ ಆಶ್ರಯ ಮತ್ತು ಬೆಂಬಲ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.