ದೇಶಚೆನ್ನೈ: ಕೋವಿಶೀಲ್ಡ್ ಲಸಿಕೆ ಪ್ರಯೋಗಗಳಿಂದ ಅಡ್ಡಪರಿಣಾಮ: 5 ಕೋಟಿ ರೂ.ಪರಿಹಾರ ಬಯಸಿದ ಸ್ವಯಂ ಸೇವಕ
ಪುಣೆ ಮೂಲದ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ 'ಕೋವಿಶೀಲ್ಡ್' ಕೋವಿಡ್-19 ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ 40 ವರ್ಷದ ವ್ಯಕ್ತಿಯೊಬ್ಬ, ಡೋಸ್ ತೆಗೆದುಕೊಂಡ ನಂತರ ಗಂಭೀರವಾದ ನರವೈಜ್ಞಾನಿಕ ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದು, 5 ಕೋಟಿ ರೂ. ಪರಿಹಾರವನ್ನು ಬಯಸಿದ್ದಾರೆ.