ದೇಶಹಲವು ಹಂತಗಳ ಮೂಲಕ ಲಸಿಕೆ ಫ್ಯಾಕ್ಟರಿಯಿಂದ ಲಸಿಕಾ ಕೇಂದ್ರಕ್ಕೆ ತಲುಪಲು 8-9 ದಿನಗಳು ಬೇಕು: ಕೇಂದ್ರ ಸರ್ಕಾರ
ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನದಲ್ಲಿ ತಕ್ಷಣಕ್ಕೆ ಎಲ್ಲರಿಗೂ ಕೊರೋನಾ ಲಸಿಕೆ ಸಿಗುವುದಿಲ್ಲ ಎಂಬ ವಾಸ್ತವಾಂಶದ ಮಧ್ಯೆ, ಕೇಂದ್ರ ಸರ್ಕಾರ ಕಾರ್ಖಾನೆಯಿಂದ ಲಸಿಕೆ ಲಸಿಕಾ ಕೇಂದ್ರಕ್ಕೆ ತಲುಪಲು 8ರಿಂದ 9 ದಿನಗಳು ಬೇಕಾಗುತ್ತವೆ, ಇವುಗಳ ಮಧ್ಯೆ ನಡೆಯುವ ಪ್ರಕ್ರಿಯೆಯಿಂದಾಗಿ ಲಸಿಕೆ ಸಿಗುವುದು ವಿಳಂಬವಾಗುತ್ತಿದೆ ಎಂದು ಹೇಳಿದೆ.