ದೇಶಸರ್ಕಾರಿ ಜಾಹೀರಾತಿನ ಸೋಗಿನಲ್ಲಿ ಆಪ್ ಪಕ್ಷದ ಜಾಹೀರಾತು ಪ್ರಕಟ: 97 ಕೋಟಿ ರೂ. ವಸೂಲಿ ಮಾಡುವಂತೆ ದೆಹಲಿ ಲೆ.ಗವರ್ನರ್ ಆದೇಶ
ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತಿನ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳ ಮೊತ್ತ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.