Uttharpradesh

ಉತ್ತರ ಪ್ರದೇಶ: ಅಕ್ಕಿ ಗಿರಣಿಯ ಡ್ರೈಯರ್ ಹೊಗೆ ಸೇವಿಸಿ ಐವರು ಕಾರ್ಮಿಕರು ಸಾವು, ಮೂವರು ಅಸ್ವಸ್ಥ
ಡ್ರೈಯರ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಗೆ ಹೊರಸೂಸಲು ಪ್ರಾರಂಭಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಐದನೇ ತೋಳ ಸೆರೆ: ಆರನೇ ನರಭಕ್ಷಕನಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ
ಬಹ್ರೈಚ್ ನಲ್ಲಿ ತೋಳಗಳ ಕಾಟ ಮಿತಿ ಮೀರಿದ್ದು. ಐದನೇ ನರಭಕ್ಷಕ ತೋಳವನ್ನು ಹರಬನ್ಸ್‌ಪುರ ಗ್ರಾಮದ ಸಮೀಪವಿರುವ ಘಾಘ್ರಾ ನದಿಯ ಬಳಿ ಸೆರೆಹಿಡಿಯಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂಬ ಶಂಕೆ; ಗಂಗಾ ಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಹಲ್ಲೆ
ಮಕ್ಕಳ ಅಪಹರಣಕಾರರೆದು ಶಂಕಿಸಿ, ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶ: ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ, ಮಂತ್ರವಾದಿ ಬಂಧನ
ಭೂತ ಬಿಡಿಸುವ ನೆಪದಲ್ಲಿ ಮಂತ್ರವಾದಿಯೊಬ್ಬ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶ: ರಾಜಕೀಯ ದ್ವೇಷಕ್ಕಾಗಿ ಮಹಿಳಾ ಅಭ್ಯರ್ಥಿ ಸೀರೆ ಎಳೆದಾಡಿದ ವೈರಿಗಳು!
ಉತ್ತರ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಬ್ಲಾಕ್ ಪಂಚಾಯಿತಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಅಭ್ಯರ್ಥಿಯ ಸೀರೆಯನ್ನು ರಾಜಕೀಯ ವೈರಿಗಳು ಎಳೆದಾಡಿದ್ದಾರೆ.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಅರವಿಂದ ಕೇಜ್ರಿವಾಲ್
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಯುಪಿ ಹಾರರ್: ಸಂಬಂಧಿಯ ಆರು ವರ್ಷದ ಬಾಲಕನ ಅಪಹರಿಸಿ ಕೊಲೆ; ಅಪ್ರಾಪ್ತನ ಬಂಧನ
ಸಂಬಂಧಿಕರ ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತ ಉತ್ತರ ಪ್ರದೇಶ ಪೊಲೀಸರು 14 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ.

ಹೃದಯಾಘಾತದಿಂದ ಉತ್ತರ ಪ್ರದೇಶ ಬಿಜೆಪಿ ಶಾಸಕ ಜನಮೇಜಯ್ ಸಿಂಗ್ ನಿಧನ
ಹಾಲಿ ಶಾಸಕ ಡಿಯೋರಾ ಕ್ಷೇತ್ರದ ಬಿಜೆಪಿ ಶಾಸಕ ಜನಮೆಜಯ್ ಸಿಂಗ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ವಕ್ತಾರ ಚಂದ್ರಮೋಹನ್ ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಟ್ರಕ್ ಗಳ ಮುಖಾಮುಖಿ, 23 ವಲಸೆ ಕಾರ್ಮಿಕರ ದಾರುಣ ಸಾವು
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಇನ್ನೂ ನಿಂತಿಲ್ಲ, ಎರಡು ಟ್ರಕ್ ಗಳು ಮುಖಾ ಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ 23 ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಬಳಿ ನಡೆದಿದೆ.

