ದೇಶಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನಿಂದ ಮಹಿಳೆಯರಿಗೆ ಭರವಸೆಗಳ ಮಹಾಪೂರ; ಉಚಿತ ಎಲ್ ಪಿಜಿ, ಬಸ್ಸು ಪ್ರಯಾಣದ ಭರವಸೆ
ಮುಂದಿನ ವರ್ಷ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದಕ್ಕೆ ವಿವಿಧ ಪಕ್ಷಗಳು ಈಗಾಗಲೇ ಸಜ್ಜಾಗುತ್ತಿವೆ. ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶತಾಯಗತಾಯ ಗೆಲ್ಲಬೇಕೆಂದು ಪಣತೊಟ್ಟವರಂತೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.