ರಾಜ್ಯಕಡು ಬಡತನದಲ್ಲೂ ಓದಿ 15 ಚಿನ್ನದ ಪದಕ ಪಡೆದ ಚಾಮರಾಜನಗರದ ಸಂತೆಮರಳ್ಳಿ ಗ್ರಾಮದ ಸುಷ್ಮಾ
ಇದು ಬಡತನದಲ್ಲೂ ಚಿನ್ನ ಬೆಳೆದ ಕಥೆ. ಇರುವುದು 3 ಎಕರೆ ಭೂಮಿ. ಆಸರೆಯಾಗಿದ್ದ ಕೊಳವೆ ಬಾವಿಯೂ ಕೈಕೊಟ್ಟ ಪ್ರಸಂಗ. ದೃತಿಗೆಡದೆ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತ ದಂಪತಿ. ಆ ದಂಪತಿಯ ಕಷ್ಟ-ಸುಃಖ-ನೋವು ನೋಡುತ್ತಲೇ ಬೆಳೆದ ಪುತ್ರಿ, ಇದೀಗ ಜ್ಞಾನ ದೇಗುಲದ ಅಂಗಳದಲ್ಲಿ ಚಿನ್ನ ಬೆಳೆದಿದ್ದಾಳೆ. ಅದು ಬರೋಬ್ಬರಿ 15 ಚಿನ್ನದ ಪದಕ ಪಡೆದು ರಾಜ್ಯದ ಗಮನ ಸೆಳೆದಿದ್ದಾಳೆ.