ದೇಶಪ್ರಧಾನಿ ಹುದ್ದೆಯ ಅಪೇಕ್ಷೆ ಇಲ್ಲ, ವಿಪಕ್ಷಗಳನ್ನು ಒಗ್ಗೂಡಿಸುವ ಸಂದರ್ಭ ಇದು: ನಿತೀಶ್ ಕುಮಾರ್
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕತ್ವ ವಹಿಸಿಕೊಳ್ಳುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದಾರೆ ಎಂಬ ಊಹಾಪೋಹಗಳ ನಡುವೆ ತಾನೂಪ್ರಧಾನಿ ಹುದ್ದೆಯ ಹಕ್ಕುದಾರನೂ ಅಲ್ಲ ಅಥವಾ ಅದರ ಅಪೇಕ್ಷೆಯೂ ಇಲ್ಲ ಎಂದು ಅವರು ಮಂಗಳವಾರ ಹೇಳಿದ್ದಾರೆ.