ರಾಜ್ಯಉಡುಪಿ: ಕೊಲೆ ಪ್ರಕರಣದ ಆರೋಪಿ ಜೈಲಿನಲ್ಲಿ ಶವವಾಗಿ ಪತ್ತೆ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಆರೋಪಿಯೊಬ್ಬರು ಶನಿವಾರ ಹಿರಿಯಡ್ಕ ಸಮೀಪದ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತನನ್ನು 37 ವರ್ಷದ ಅನೂಪ್ ಶೆಟ್ಟಿ ಎಂದು ಗುರುತಿಸಲಾಗಿದ್ದು, 2021 ರ ಜುಲೈನಲ್ಲಿ ಕುಂದಾಪುರದ ಕಾಳಾವರ ಗ್ರಾಮದಲ್ಲಿ ತನ್ನ ಬ್ಯುಸಿನೆಸ್ ಪಾರ್ಟ್ನರ್ ಅಜೇಂದ್ರ ಶೆಟ್ಟಿ ಎಂಬುವವರನ್ನು ಕೊಲೆ ಮಾಡಿದ ಆರೋಪದ ಮೇಲೆ ವಿಚಾರಣೆಗೊಳಪಟ್ಟಿದ್ದರು.