ರಾಜ್ಯರಾಜ್ಯ ಸರ್ಕಾರಿ ನೌಕರರೇ ಎಚ್ಚರ! ಕನ್ನಡದಲ್ಲಿ ಮುದ್ರಣ ದೋಷವಾದರೆ ಸಂಬಳ ಕಡಿತ ಸಾಧ್ಯತೆ
ರಾಜ್ಯ ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಅಥವಾ ವ್ಯಾಕರಣದಲ್ಲಿ ದೋಷವಾದರೆ, ನಿಮ್ಮ ಸಂಬಳದಲ್ಲಿ ಕಡಿತವಾಗಲಿದೆ, ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ.