ವಿದೇಶಹ್ಯಾಕಿಂಗ್ ನ್ಯೂಸ್: ಒಬಾಮಾ, ಬಿಲ್ ಗೇಟ್ಸ್, ಮಸ್ಕ್ ಸೇರಿ ಉನ್ನತ ಉದ್ಯಮಿ, ನಾಯಕರ ಟ್ವಿಟ್ಟರ್ ಖಾತೆ ಹ್ಯಾಕ್!
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರವಸೆಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹಾಗೂ ಇನ್ನಿತರೆ ಹಲವು ಉನ್ನತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನು ಸೈಬರ್ ಕಳ್ಲರು ಏಕಕಾಲಕ್ಕೆ ಹ್ಯಾಕ್ ಮಾಡಿದ್ದಾರೆ.