ರಾಜಕೀಯ2024ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ ಸೋಮಣ್ಣ ಸ್ಪರ್ಧೆ? ಸಂಚಲನ ಮೂಡಿಸಿದ ಸಂಸದ ಜಿ ಎಸ್ ಬಸವರಾಜು ಹೇಳಿಕೆ
2024 ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿ ಮುಂದಾಗಿದೆಯೇ.ಹಾಲಿ ಸಂಸದ ಜಿ ಎಸ್ ಬಸವರಾಜು ಅವರು ನಿನ್ನೆ ಮಂಗಳವಾರ ಕ್ಷೇತ್ರದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದ್ದು ಅದರಲ್ಲಿ ಸೋಮಣ್ಣನವರ ವಿಚಾರ ಅವರು ಪ್ರಸ್ತಾಪಿಸಿದ್ದಾರೆ.