ರಾಜ್ಯತುಳುನಾಡಿನ ಗುಳಿಗ ದೈವಕ್ಕೆ ಅರಗ ಜ್ಞಾನೇಂದ್ರ ಅವಮಾನ ಮಾಡಿದರೇ? ಸಚಿವರು ಕೊಟ್ಟ ಸ್ಪಷ್ಟನೆಯೇನು?
ಕರಾವಳಿ ತುಳುನಾಡಿನ ಜನರ ಆರಾಧ್ಯ ದೈವವಾದ ಗುಳಿಗ ದೈವದ ಆಧಾರಿತ 'ಶಿವಧೂತೆ ಗುಳಿಗೆ' ನಾಟಕ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಸಚಿವರು ಗುಳಿಗ ದೈವದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.