ವಿದೇಶಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಗಳಿಂದ ಗುಂಡಿಟ್ಟು ಮಹಿಳೆ ಹತ್ಯೆ; ‘ಸ್ವಯಂರಕ್ಷಣೆ ಕ್ರಮ’ ಎಂದು ಟ್ರಂಪ್ ಸಮರ್ಥನೆ; Video
ಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ.