ವಿದೇಶಅಮೆರಿಕ ಅಧ್ಯಕ್ಷ ಚುನಾವಣೆ ಮತ ಎಣಿಕೆಯಲ್ಲಿ ವಂಚನೆ ಆರೋಪ: ನಿಕ್ಕಿ ಹ್ಯಾಲೆ ಮೌನಕ್ಕೆ ಜೂನಿಯರ್ ಟ್ರಂಪ್ ಆಕ್ರೋಶ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾಗುತ್ತಿದ್ದಂತೆ, ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಪರ ಹೆಚ್ಚಿನ ಮತಗಳು ವಾಲುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಟ್ರಂಪ್ ಭಾರತೀಯ ಮೂಲದ ಖ್ಯಾತ ರಾಜಕಾರಣಿ, ವಿಶ್ವಸಂಸ್ಥೆಗೆ ಅಮೆರಿಕದ ಅಂಬಾಸಿಡರ್ ಆಗಿದ್ದ ನಿಕ್ಕಿ ಹ್ಯಾಲೆ ವಿರುದ್ಧ ಹರಿಹಾಯ್ದಿದ್ದಾರೆ.