ದೇಶಅನ್ ಲಾಕ್ 1.0: ರಾತ್ರಿ ಕರ್ಫ್ಯೂ ಜಾರಿ ಇದ್ದರೂ ಹೆದ್ದಾರಿಯಲ್ಲಿ ಬಸ್, ಟ್ರಕ್ ಗಳ ಸಂಚಾರಕ್ಕೆ ಕೇಂದ್ರ ಅನುಮತಿ
ದೇಶಾದ್ಯಂತ ಲಾಕ್ ಡೌನ್ ಸಂಪೂರ್ಣ ಸಡಿಲಗೊಳಿಸಿದ್ದರೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ರಾತ್ರಿ ಸಮಯದಲ್ಲೂ ಹೆದ್ದಾರಿಗಳಲ್ಲಿ ಪ್ರಯಾಣಿಕ ಬಸ್ ಗಳು ಮತ್ತು ಗೂಡ್ಸ್ ಲಾರಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.