ದೇಶ5 ಲಕ್ಷ ಮುಸ್ಲಿಂ ಮನೆಗಳು, ಮದರಸಾ, ದರ್ಗಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಜೆಪಿ ತಯಾರಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ 'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಆಗಸ್ಟ್ 15 ರಂದು ಸುಮಾರು 5 ಲಕ್ಷ ಮುಸ್ಲಿಂ ಮನೆಗಳು, ಮದರಾಸ ಮತ್ತು ದರ್ಗಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಉತ್ತರ ಪ್ರದೇಶ ಬಿಜೆಪಿ ನಿರ್ಧರಿಸಿದೆ. ಆಗಸ್ಟ್ 12 ರಿಂದ ಮೂರು ದಿನ ಬಿಜೆಪಿ ಮುಸ್ಲಿಂ ಮೋರ್ಚಾ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.