ರಾಜ್ಯಕೆಎಸ್ಆರ್ಟಿಸಿ ಬಸ್ ಸೇವೆ ವಂಚಿತ ಈ ಬುಡಕಟ್ಟು ಹಳ್ಳಿಗಳಿಗೆ 'ಶಕ್ತಿ ಯೋಜನೆ'ಯ ಪ್ರಯೋಜನವೇ ಸಿಗುತ್ತಿಲ್ಲ!
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಳಗಿನ ಗ್ರಾಮಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆಗಳನ್ನು ಹೊಂದಿಲ್ಲದ ಕಾರಣ ಹಲವಾರು ಬುಡಕಟ್ಟು ಪ್ರದೇಶಗಳ ನಿವಾಸಿಗಳು ಈ ಪ್ರಯೋಜನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.