ರಾಜ್ಯ7ನೇ ದಿನಕ್ಕೆ ಕಾಲಿಟ್ಟ ರಸ್ತೆ ಸಾರಿಗೆ ನೌಕರರ ಮುಷ್ಕರ, ಕೆಲವೆಡೆ ಬಸ್ ಮೇಲೆ ಕಲ್ಲು ತೂರಾಟ!
6ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ ಆರ್ ಟಿಸಿ)ದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಏಳನೇ ದಿನ ಕಾಲಿಟ್ಟಿದ್ದು, ಮಂಗಳವಾರ ಕೆಲವೇ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿದ್ದರು.