ದೇಶಉತ್ತರ ಪ್ರದೇಶ: ಎಲ್ಲಾ 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್ ಪಿಗೆ ಹಿನ್ನಡೆ!
ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಕ್ಷೇತ್ರಗಳಲ್ಲಿಯೂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದೆ. ಪ್ರಸ್ತುತ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಬಿಎಸ್ಪಿ ದೇಶದಲ್ಲಿ ಸುಮಾರು 1.92 ರಷ್ಟು ಮತ್ತು ಉತ್ತರ ಪ್ರದೇಶದಲ್ಲಿ 9.16 ರಷ್ಟು ಶೇಕಡಾವಾರು ಮತಗಳನ್ನು ಗಳಿಸಿದೆ.