ರಾಜ್ಯಪ್ರವಾಸೋದ್ಯಮದ ಹಾಟ್ಸ್ಪಾಟ್ ಆಗಿ ಬದಲಾಗಲಿವೆ ಬೆಂಗಳೂರಿನ ರೋರಿಚ್ ಎಸ್ಟೇಟ್, ಬೆಳಗಾವಿಯ ಸವದತ್ತಿ!
23 ರಾಜ್ಯಗಳ 40 ಯೋಜನೆಗಳಲ್ಲಿ ಒಂದೆಂದು ಪಟ್ಟಿ ಮಾಡಲಾದ ರೋರಿಚ್ ಎಸ್ಟೇಟ್ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸಲಿವೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಲಿಂಕ್ಡ್ಇನ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಶುಕ್ರವಾರ ಈ ಘೋಷಣೆ ಮಾಡಿದ್ದಾರೆ.