ರಾಜ್ಯಪೂರೈಕೆ ಹೆಚ್ಚಳ: ರಾಜ್ಯದಲ್ಲಿ ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ, ಕೆಜಿ 20 ರೂ.ಗೆ ಮಾರಾಟ
ಕೆಲವು ವಾರಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೇಟೊ ಬೆಲೆ ಇದೀಗ ತೀವ್ರ ಕುಸಿತ ಕಂಡಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಟೊಮೇಟೊ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಕೆಜಿ ಟೊಮೇಟೊ 20 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.